ಬರ್ಕ್‍ಲೀ 1 

	ಇಂಗ್ಲೆಂಡಿನ ಗ್ಲಾಸ್ಟ್‍ರ್ ಷೈರ್ ಜಿಲ್ಲೆಯ ಪಟ್ಟಣ. ಬರ್ಕ್‍ಲೀ ಕಣಿವೆಯಲ್ಲಿ ಹರಿಯುವ ಸವರ್ನ್ ನದಿ ದಡದಲ್ಲಿ ಗ್ಲಾಸ್ಟರ್ ನಗರಕ್ಕೆ ನೈಋತ್ಯದಲ್ಲಿ ಸುಮಾರು 26 ಕಿಮೀ ದೂರದಲ್ಲಿದೆ. 1 ನೆಯ ಎಡ್ವರ್ಡ್ ದೊರೆ ಆಳ್ವಿಕೆಯಲ್ಲಿ (1272-1307) ಸ್ಥಾಪಿತವಾದ ಇಲ್ಲಿನ ಪೌರಸಭೆ 1885ರಲ್ಲಿ ರದ್ದಾಯಿತು. ಪಟ್ಟಣಕ್ಕೆ ಸಮೀಪದಲ್ಲಿರುವ ದುರ್ಗ 1153ರಿಂದ ಬರ್ಕ್‍ಲೀ ಶ್ರೀಮಂತ ಕುಟುಂಬದ ನಿವಾಸ. ಈ ದುರ್ಗದಲ್ಲಿ 2ನೆಯ ಎಡ್ವರ್ಡ್ ದೊರೆಯನ್ನು ಬಂಧನದಲ್ಲಿಟ್ಟು ಕೊಲೆ ಮಾಡಲಾಯಿತು (1327). ಸವರ್ನ್ ನದಿ ಬಳಿ 1957ರಿಂದ ಒಂದು ಪರಮಾಣು ವಿದ್ಯುತ್‍ಸ್ಥಾವರ ಕಾರ್ಯನಿರತವಾಗಿದೆ.	
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ